ದಿ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ( ),(ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆ) ಇದನ್ನು ದಿ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ & ವರ್ಕ್ಸ್ ಅಕೌಂಟೆಂಟ್ಸ್ ಆಫ್ ಇಂಡಿಯಾ ( ) ಎಂದೂ ಕರೆಯಲಾಗುತ್ತಿತ್ತು, ಇದು ಭಾರತದಲ್ಲಿ ವೃತ್ತಿಪರ ಅಕೌಂಟೆನ್ಸಿ ಸಂಸ್ಥೆಯಾಗಿದೆ. ಇದು ಭಾರತ ಸರ್ಕಾರದ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದ ಪ್ರಭುತ್ವದಲ್ಲಿದೆ. ಜಾಗತಿಕ ಮಟ್ಟದಲ್ಲಿ ವೆಚ್ಚ ಮತ್ತು ನಿರ್ವಹಣಾ ಲೆಕ್ಕಪತ್ರ ವೃತ್ತಿಗೆ ಕೊಡುಗೆ ನೀಡಲು ಇದು ತನ್ನ ಪ್ರಧಾನ ಜವಾಬ್ದಾರಿಯನ್ನು ಹೊಂದಿದೆ. == ಇತಿಹಾಸ == ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆ ಯನ್ನು ಮೊದಲ ಬಾರಿಗೆ 1913 ರ ಕಂಪನಿಗಳ ಕಾಯಿದೆಯ ನಿಬಂಧನೆಗಳ ಪ್ರಕಾರ 14 ಜೂನ್ 1944 ರಂದು ನೋಂದಾಯಿತ ಸೀಮಿತ ಕಂಪನಿಯಾಗಿ ರಚಿಸಲಾಯಿತು. ಸ್ವಾತಂತ್ರ್ಯದ ನಂತರ, ಭಾರತೀಯ ಸಂಸತ್ತು "ದಿ ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ಸ್ ಆಕ್ಟ್" (ಆಕ್ಟ್ ನಂ.23 ಆಫ್ 1959), ವಿಶೇಷ ಕಾಯಿದೆ, 28 ಮೇ 1959 ರಂದು ಗೆ ಶಾಸನಬದ್ಧ ಮಾನ್ಯತೆಯನ್ನು ನೀಡಿದಾಗ ಸಂಸ್ಥೆಯು ಶಾಸನಬದ್ಧ ಮಾನ್ಯತೆಯನ್ನು ಪಡೆಯಿತು. ಈಗ ಸಂಸ್ಥೆಯು ೮೫೦೦೦ ಸದಸ್ಯರನ್ನು ಹೊಂದಿದೆ.